ಸ್ವಚ್ಛತೆ ಇಲ್ಲದ ಹೋಟೆಲ್ ವಿರುದ್ಧ ಕ್ರಮಕ್ಕೆ ಸೂಚನೆ

  |   Tumkurnews

ಕುಣಿಗಲ್: ಪಟ್ಟಣದಲ್ಲಿನ ಹೋಟೆಲ್ಗಳಲ್ಲಿ ಸ್ವಚ್ಛತೆ ಇಲ್ಲದೆ ಗಬ್ಬೆದ್ದು ನಾರುತ್ತಿವೆ. ಊಟ ಮಾಡಲು ಹೋಗುವ ಜನರು ರೋಗ ರುಜಿನಗಳಿಗೆ ತುತ್ತಾಗು ತ್ತಿದ್ದಾರೆ ಏನು ಮಾಡುತ್ತಿದ್ದೀರಾ ಎಂದು ತಾಪಂ ಅಧ್ಯಕ್ಷ ಹರೀಶ್‌ನಾಯ್ಕ ತಾಲೂಕು ವೈದ್ಯಾಧಿಕಾರಿ ಡಾ.ಜಗದೀಶ್‌ ಅವರನ್ನು ತರಾಟೆ ತೆಗೆದುಕೊಂಡ ಪ್ರಸಂಗ ಶುಕ್ರವಾರ ಕೆಡಿಪಿ ಸಭೆಯಲ್ಲಿ ನಡೆಯಿತು.

ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪಟ್ಟಣದ ಸರ್ಕಾರಿ ಆಸ್ಪತ್ರೆ ಎದುರಿನಲ್ಲೇ ಇರುವ ಹೋಟೆಲ್ ಒಂದರಲ್ಲಿ ಸ್ವಚ್ಛತೆ ಇಲ್ಲ, ಹೋಟೆಲ್ ಒಳಗೆ ಹೋದರೆ ವಾಂತಿ ಬರುತ್ತದೆ. ಈ ಸಂಬಂಧ ಏನು ಕ್ರಮಕೈ ಗೊಂಡಿದ್ದೀರಾ ಎಂದು ಟಿಎಚ್ಒ ಅವರನ್ನು ಪ್ರಶ್ನಿಸಿದ ಅಧ್ಯಕ್ಷರು ಜನರಿಗೆ ಅನ್ಯಾಯ ಮಾಡಿದರೆ ದೇವರು ನಿಮಗೆ ಒಳ್ಳೆಯದು ಮಾಡುವುದಿಲ್ಲ ಎಂದರು.

ಹೋಟೆಲ್ಗಳ ರದ್ದತಿಗೆ ಸೂಚನೆ: ಪಟ್ಟಣದ ಹೋಟೆಲ್ಗಳಲ್ಲೇ ಈ ಸ್ಥಿತಿ ಇದ್ದರೆ ಇನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಹೋಟೆಲ್ಗಳ ಸ್ಥಿತಿ ಹೇಗಿರ ಬಹುದು ಎಂದು ಪ್ರಶ್ನಿಸಿದರು. ತಾಲೂಕಿನ ಅಂಚೆ ಪಾಳ್ಯ ತಾಜ್‌ ಹೋಟೆಲ್ನ ಮಾಂಸದ ಮೂಳೆ ಚೂರುಗಳು ಹಾಗೂ ಕಲುಷಿತ ನೀರನ್ನು ರಸ್ತೆಗೆ ಬಿಡಲಾಗಿದೆ. ಕಲುಷಿತ ನೀರಿನ ವಾಸನೆ ತಾಳಲಾರದೆ ಜನರು ಉಸಿರು ಕಟ್ಟಿ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಚ್ಛತೆ ಇಲ್ಲದ ಹೋಟೆಲ್ಗಳ ರದ್ದತಿಗೆ ಕ್ರಮಕೈಗೊಳ್ಳುವಂತೆ ಸೂಚಿಸಿದರು....

ಫೋಟೋ - http://v.duta.us/zV-RRwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/eBjNrwAA

📲 Get Tumkur News on Whatsapp 💬