107 ಪ್ರಕರಣ-1.04 ಲಕ್ಷ ದಂಡ ವಸೂಲಿ

  |   Bidarnews

ಬೀದರ: ಜಿಲ್ಲೆಯಲ್ಲಿ ಸೆ.5ರಿಂದ ಹೊಸ ಮೋಟಾರು ವಾಹನ ಕಾಯ್ದೆ ಅನುಸಾರ ದಂಡ ವಿಧಿಸುವ ಕಾರ್ಯ ಆರಂಭಗೊಂಡಿದ್ದು ಒಂದೇ ದಿನದಲ್ಲಿ 107 ಪ್ರಕರಣಗಳಿಗೆ ರೂ. 1.04 ಲಕ್ಷ ದಂಡ ವಸೂಲಿ ಮಾಡಲಾಗಿದೆ.

ವಾಹನ ಸವಾರರು ರಸ್ತೆಗೆ ಬರುವ ಮುನ್ನ ವಾಹನದ ದಾಖಲೆಗಳ ಜತೆಗೆ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕಾದ ಅನಿವಾರ್ಯತೆ ಈಗ ಎದುರಾಗಿದೆ. ಜಿಲ್ಲೆಯ ಎಲ್ಲಾಕಡೆಗಳಲ್ಲಿ ಈಗಾಗಲೇ ಪೊಲೀಸ್‌ ಇಲಾಖೆಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಸಿದ್ದು, ಯಾರು ನಿಯಮ ಉಲ್ಲಂಘನೆ ಮಾಡುತ್ತಾರೊ ಅವರು ಭಾರೀ ಪ್ರಮಾಣದ ದಂಢ ಭರಿಸಬೇಕಾಗಿದೆ.

300ಕ್ಕೂ ಹೆಚ್ಚು ಜನರ ಸಾವು: ಬೀದರ್‌ ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಅಪಘಾತಗಳ ಸಂಭವಿಸುತ್ತಿದ್ದು, ಪ್ರತಿ ವರ್ಷ ಸರಾಸರಿ 300ಕ್ಕೂ ಅಧಿಕ ಸಾವು ಸಂಭವಿಸುತ್ತಿವೆ. 2014-2018ನೇ ಅವಧಿಯಿಂದ ಈ ವರೆಗೆ ಪ್ರತಿವರ್ಷ 380 ಜನ ಮರಣ ಹೊಂದಿದ್ದಾರೆ. ಅಲ್ಲದೆ, 3,068 ಜನರು ಗಾಯಗೊಂಡಿದ್ದಾರೆ. 2018-19ನೇ ಸಾಲಿನಲ್ಲಿ ಸಂಭವಿಸಿದ ಅಪಘಾತಗಳಲ್ಲಿ 315 ಜನರ ಮರಣಹೊಂದಿದ್ದು, 2,538 ಜನರು ಗಾಯಗೊಂಡಿದ್ದಾರೆ. ಬಹುತೇಕರು ರಸ್ತೆ ನಿಯಮಗಳನ್ನು ಪಾಲಿನೆ ಮಾಡದ ಹಿನ್ನೆಲೆಯಲ್ಲಿ ಮರಣ ಹೊಂದುತ್ತಿದ್ದು ರಸ್ತೆ ಸುರಕ್ಷತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಹಿನ್ನೆಲೆಯಲ್ಲಿ ಅಪಘಾತ ಪ್ರಕರಣಗಳು ಇದೀಗ ಕಡಿಮೆ ಆಗುತ್ತಿವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌ ಮಾಹಿತಿ ನೀಡಿದ್ದಾರೆ....

ಫೋಟೋ - http://v.duta.us/b9c1SAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/AzxMggAA

📲 Get Bidar News on Whatsapp 💬