309 ಕೋಟಿ ರೂ. ಕ್ರಿಯಾ ಯೋಜನೆ

  |   Haverinews

ಹಾವೇರಿ: ಹಾವೇರಿ ಜಿಲ್ಲಾ ಪಂಚಾಯಿತಿ ಕಾರ್ಯಕ್ರಮಗಳ 2019-20ನೇ ಸಾಲಿನ 30979.67 ಲಕ್ಷ ರೂ.ಗಳ ವಾರ್ಷಿಕ ಕ್ರಿಯಾ ಯೋಜನೆಗೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಸರ್ವಾನುಮತದಿಂದ ಅನುಮೋದನೆ ನೀಡಿತು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಪಂ ಅಧ್ಯಕ್ಷ ಎಸ್‌.ಕೆ. ಕರಿಯಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ 31 ಇಲಾಖೆಗಳಿಗೆ ಅನುದಾನ ಹಂಚಿಕೆ ಮಾಡಿ ಲಿಂಕ್‌ ಡಾಕ್ಯೂಮೆಂಟ್ ಅಡಿ 2019-20ನೇ ಸಾಲಿನಲ್ಲಿ ತಯಾರಿಸಲಾದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.

ಸಂದರ್ಭದಲ್ಲಿ ಜಿಪಂನ ಶಾಸನಬದ್ಧ ಅಭಿವೃದ್ಧಿ ಅನುದಾನದ 2019-20ನೇ ಸಾಲಿನ 565 ಲಕ್ಷ ರೂ.ಗೆ ಪಂಚಾಯತ್‌ ರಾಜ್‌ ಇಂಜಿನಿಯರ್‌ ವಿಭಾಗದಿಂದ ತಯಾರಿಸಲಾದ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.

ಶಾಸನಬದ್ಧ ಅನುದಾನದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಕಟ್ಟಡದ ಮಳೆ ನೀರು ಕೊಯ್ಲು, ಶೆಡ್‌ ನಿರ್ಮಾಣ, ಕೊಠಡಿಗೆ ಪಿಓಪಿ, ಪ್ಯಾನ್‌, ವಾಲ್ ಪ್ಯಾನ್‌, ವಾರ್ಡ್‌ರೋಬ್‌ ಹಾಗೂ ನೆಲ ಹಾಸಿಗೆ ಪ್ಲೋರಿಂಗ್‌ ಮ್ಯಾಟ್ ಅಳವಡಿಕೆ, ನೀರಿನ ಟ್ಯಾಂಕ್‌ ನಿರ್ಮಾಣ, ಹಳೆ ಕಚೇರಿ ನಿರ್ವಹಣೆಗಾಗಿ 75 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ. ಈ ಕುರಿತಂತೆ ಸದಸ್ಯರು ಆಕ್ಷೇಪಣೆ ವ್ಯಕ್ತಪಡಿಸಿ, ಯಾವುದೇ ಸದಸ್ಯರ ಗಮನಕ್ಕೆ ತರದೆ ಅನುದಾನ ಒದಗಿಸಲಾಗಿದೆ ಎಂದರು. ಆಕ್ಷೇಪಣೆ ಹಿನ್ನೆಲೆಯಲ್ಲಿ ಈ ಕಾಮಗಾರಿಗಳನ್ನು ಬದಲಿಸಿ ಜಿಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಅತಿಥಿ ಗೃಹದ ವಿನ್ಯಾಸಕ್ಕೆ ಬಳಸಲು ತಿದ್ದುಪಡಿಯೊಂದಿಗೆ ಶಾಸನಬದ್ಧ ಅನುದಾನದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು....

ಫೋಟೋ - http://v.duta.us/cjP6ogAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/TTGQJAAA

📲 Get Haveri News on Whatsapp 💬